ಸಂಚಿತಾ ಭಟ್ಟಾಚಾರ್ಯ ಅಥವಾ ಗುರು ಸಂಚಿತಾ ಭಟ್ಟಾಚಾರ್ಯ ಒಬ್ಬ ಭಾರತೀಯ ಒಡಿಸ್ಸಿ ನೃತ್ಯಗಾರ್ತಿ. ಅವರು ಶಾಸ್ತ್ರೀಯ ಒಡಿಸ್ಸಿ ನೃತ್ಯದಲ್ಲಿ ಪರಿಣತಿ ಹೊಂದಿದ್ದಾರೆ. == ವೃತ್ತಿ == ಅವರು ನ್ಯೂಯಾರ್ಕ್‌ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಸೇರಿದಂತೆ ಭಾರತದಾದ್ಯಂತ ಮತ್ತು ವಿದೇಶಗಳಲ್ಲಿ ಪ್ರದರ್ಶನ ನೀಡಿದ್ದಾರೆ. ಅವರು ದತ್ತಿ ನಿಧಿಗಳಿಗಾಗಿ ಯುಎಸ್ ಪ್ರವಾಸ ಮಾಡಿದರು. ಅವರು ಯುಎಸ್ ನಲ್ಲಿ ಚಲನಚಿತ್ರವೊಂದರಲ್ಲಿ ಕಾಣಿಸಿಕೊಂಡರು. ಇದರ ಶೂಟಿಂಗ್ ಪ್ರಗತಿಯಲ್ಲಿದೆ. ನ್ಯೂಯಾರ್ಕ್ ಟೈಮ್ಸ್ " ಅವರ ನೃತ್ಯ ಪರಿಪೂರ್ಣತೆಯಿಂದ ಕೂವಿದೆ ಎಂದು ಹೇಳಿರುವುದನ್ನು ಗಮನಿಸಬಹುದು" ಒಡಿಸ್ಸಿ ನೃತ್ಯವು ಬಿಸಿ ಯ ಮೊದಲ ಮತ್ತು ಎರಡನೆಯ ಶತಮಾನ ಹಿಂದಿನದು ಮತ್ತು ಭಾರತದ ಅತ್ಯಂತ ಹಳೆಯ ನೃತ್ಯ ಪ್ರಕಾರಗಳಲ್ಲಿ ಇದು ಒಂದಾಗಿದೆ. == ವೈಯಕ್ತಿಕ ಜೀವನ == ಸಂಚಿತಾ ಭಟ್ಟಾಚಾರ್ಯ ಅವರು ಭಾರತೀಯ ಶಾಸ್ತ್ರೀಯ ಸಂಗೀತಗಾರ ತರುಣ್ ಭಟ್ಟಾಚಾರ್ಯ ಅವರನ್ನು ವಿವಾಹವಾದರು. == ಪ್ರದರ್ಶನಗಳು == ಭಾರತದಲ್ಲಿ ಅಭಿನಯಗಳು ಸಂಕೇತ್ ಮೋಚನ್ ಉತ್ಸವ - ವಾರಣಾಸಿ ದೋವರ್ ಲೇನ್ ಸಂಗೀತ ಸಮ್ಮೇಳನ ಭಾರತದಲ್ಲಿ ರಾಷ್ಟ್ರೀಯ ಕಡಲ ದಿನಾಚರಣೆ, ೨೦೦೮ ಪುರಿ ಜಗನ್ನಾಥ ದೇವಾಲಯ ೧ ನೇ ಭಾರತ ಅಂತರಾಷ್ಟ್ರೀಯ ಮಹಿಳಾ ಉತ್ಸವದ ಉದ್ಘಾಟನಾ ಸಮಾರಂಭ ಇಂಡಿಯನ್ ಸ್ಪ್ರಿಂಗ್ ಫೆಸ್ಟ್ ವಿದೇಶದಲ್ಲಿ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್‌ನಲ್ಲಿ ಯ ೨೫ ನೇ ವಾರ್ಷಿಕೋತ್ಸವದ ಆಚರಣೆ ಎಸ್ಪ್ಲಾನೇಡ್ ಥಿಯೇಟರ್ - ಸಿಂಗಾಪುರ ಉತ್ತರ ಕೆರೊಲಿನಾದಲ್ಲಿ ಗ್ರ್ಯಾಂಡ್ ಫಿನಾಲೆ ಆಫ್ ಇಂಡಿಯಾ ಫೆಸ್ಟಿವಲ್ ಮಿನ್ನೇಸೋಟ ವಿಶ್ವವಿದ್ಯಾಲಯ - ಯುಎಸ್ ಎ ಕಿಂಗ್ಸ್ಟನ್ ಸರ್ಕಾರದಿಂದ ಹಲ್ ಟ್ರಕ್ ಥಿಯೇಟರ್ - ಯುಕೆ == ಗುರುತಿಸುವಿಕೆ == ಭಾರತದ ಸಾಂಸ್ಕೃತಿಕ ರಾಯಭಾರಿ ೨೦೧೧ ರಲ್ಲಿ ಸಂಗೀತ್ ಶ್ಯಾಮಲಾ ಪ್ರಶಸ್ತಿ ೨೦೧೧ ರಲ್ಲಿ ಹಿಂದೂಥಾನ್ ಆರ್ಟ್ ಅಂಡ್ ಮ್ಯೂಸಿಕ್ ಸೊಸೈಟಿಯಿಂದ ರಾಶ್ ರತ್ನ ಪ್ರಶಸ್ತಿ ೨೦೦೮ ರಲ್ಲಿ ಡೋವರ್ ಲೇನ್ ಸಂಗೀತ ಸಮ್ಮೇಳನ ಪ್ರಶಸ್ತಿ ಭಾರತದ ಸಾಂಸ್ಕೃತಿಕ ರಾಯಭಾರಿ ೨೦೦೭ ರಲ್ಲಿ ಇಂಡಿಯನ್ ಪ್ರೆಸ್ ನಿಂದ ಕೋಲ್ಕತ್ತಾ ಗೌರವ್ ಸಮ್ಮಾನ್ == ಗ್ಯಾಲರಿ == == ಸಹ ನೋಡಿ == ತರುಣ್ ಭಟ್ಟಾಚಾರ್ಯ == ಉಲ್ಲೇಖಗಳು == == ಬಾಹ್ಯ ಕೊಂಡಿಗಳು ==